ಸಾಮಾನ್ಯವಾಗಿ ನಮ್ಮ ಜೀವನದ ಬಗ್ಗೆ ನಮಗೆ ಹಲವಾರು ಕನಸುಗಳು ಇರುತ್ತವೆ. ಅದನ್ನು ನನಸು ಮಾಡುವ ಬಗೆ ಹೇಗೆ? ಕನಸುಗಳ ಬಗ್ಗೆ ಹಂಬಲಿಸುತ್ತಿದ್ದರೆ ಅವು ನಿಜವಾಗುವುದು ಸಾಧ್ಯವಿಲ್ಲ. ಅದಕ್ಕೆ ಒಂದು ಯೋಜನಾಬದ್ಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಅಂತಹ ಒಂದು ಪ್ರಯತ್ನವೇ "ಮೇಕ್ ಡ್ರೀಮ್ಸ್ ರಿಯಲ್ " ಎಂದು ಅಂಗ್ಲ ಭಾಷೆಯಲ್ಲಿ ರಚಿತವಾಗಿರುವ ಪುಸ್ತಕ. ಮೊದಲಿಗೆ ಒಂದು ವರ್ಷದಲ್ಲಿ ಸಾಧಿಸಬೇಕೆಂದಿರುವ ಕನಸನ್ನು ಬರೆದುಕೊಂಡನಂತರ ಅದನ್ನು ತ್ರೈಮಾಸಿಕ ನಾಲ್ಕು ಗುರಿಗಳನ್ನಾಗಿ ಪರಿವರ್ತಿಸಿಕೊಂಡು, ಗುರಿಗಳ ಯುಕ್ತಾಯುಕ್ತತೆಯನ್ನು ಪರಿಶೀಲಿಸುವ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಪ್ರತಿ ತ್ರೈಮಾಸಿಕ ಗುರಿಗಳನ್ನು ಮತ್ತೆ ಹನ್ನೆರಡು ವಾರದ ಯೋಜನೆಗಳನ್ನಾಗಿ ದಾಖಲಿಸಿ ಅದರಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರ ಜೊತೆಯಲ್ಲಿಯೇ ಪ್ರತಿ ವಾರಾಂತ್ಯ ಗುರಿಯನ್ನು ಸಾಧಿಸುವಲ್ಲಿ ಎಷ್ಟರಮಟ್ಟಿಗೆ ಸಾಧನೆಯಾಗಿದೆ ಎಂದು ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಾಲಾಗಿದೆ. ಈ ಎಲ್ಲ ದಾಖಲಾತಿಗಳ ಮಧ್ಯೆ ಮಧ್ಯೆ ಕನಸುಗಳನ್ನು ಕಂಡು ಗುರಿ ಸಾಧಿಸಿದವರ ಕಥೆಗಳು ಹಾಗು ಹುರಿದುಂಬಿಸುವ ಕಥೆಗಳನ್ನು ಸೇರಿಸಲಾಗಿದೆ. ಒಟ್ಟಿನಲ್ಲಿ ಈ ಪುಸ್ತಕ ಪ್ರತಿಯೊಬ್ಬರೂ ಉಪಯೋಗಿಸುವ ಮಾರ್ಗದರ್ಶಿಯ ರೂಪದಲ್ಲಿ ಮೂಡಿಬಂದಿದೆ. ರೋಟರಿ ಯಲಹಂಕ ಸಂಸ್ಥೆಯು ತಮ್ಮ ಹಲವಾರು ಸಾಮಾಜಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿ ೨೦೦ ರುಪಾಯಿ ಕೊಡುಗೆಗೆ ಈ ಸುಂದರ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಿದೆ. ಈ ಕಾರ್ಯ ಯೋಜನೆಗೆ ಸಹಾಯ ಮಾಡಿ ಪ್ರತಿಯಾಗಿ ಒಂದು ಉಡುಗೊರೆ ಪಡೆಯುವ ಸದಾವಕಾಶ ನಿಮ್ಮ ಮುಂದೆ ಇದೆ. ಸಂಪರ್ಕಿಸಬೇಕಾದ ಇ-ವಿಳಾಸ palli07@gmail.com
Sunday, August 9, 2009
Subscribe to:
Posts (Atom)